ಶ್ರೀ ತ್ರಯಂಬಿಕೇದೇವಿ ಟಾಕೀಸ್ ಲಾಂಛನದಲ್ಲಿ ಪಾರ್ವತಿ ಬಿ ಕರಾನಿಕ್ - ಸುನಿ ನಿರ್ಮಾಣದ ಯು ದ ಎಂಡ್ ಯಾ ಚಿತ್ರಕ್ಕೆ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ರವಿ ಫಾರ್ಮ್ಹೌಸ್ನಲ್ಲಿ ಅನಂತನಾಗ್, ರಾಜು ತಾಳಿಕೋಟೆ, ರೋಹನ್, ಕುಮುದ, ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾಯಿತು. ನಾಗೇಂದ್ರ ಕರಾನಿಕ್ ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಹಣ ಮನೋಹರ್ ಜೋಷಿ. ಸಾಹಿತ್ಯ ಸಂಗೀತ ಮನುಶ್ರೀ, ಹಿನ್ನೆಲೆ ಸಂಗೀತ ಬಿ.ಜೆ. ಭರತ್, ಸಂಕಲನ ಅಕ್ಷಯ್ ಪಿ.ರಾವ್, ಸಹ ನಿರ್ದೇಶನ - ಮೋಹನ್ ಕುಮಾರ್ ವೆಂಕಟೇಶ್ವರ್ ರಾಜು, ಸಾಹಸ - ವಿನೋದ್, ನೃತ್ಯ-ಕಲೈ, ಕಲೆ-ಬಾಬುಖಾನ್-ಶಿವರಾಮ್, ನಿರ್ವಹಣೆ- ಅನಿಲ್ ಬಿ ಕೃಷ್ಣ - ಸುನಿಲ್ ಬಿ ಕೃಷ್ಣ, ತಾರಾಗಣದಲ್ಲಿ ರೋಹನ್ ಕರಾನಿಕ್, ಕುಮುದ ಗೌಡ, ಅನಂತನಾಗ್, ರಂಗಾಯಣ ರಘು, ಅವಿನಾಶ್, ರಾಜು ತಾಳಿಕೋಟೆ, ವಿಜಯಕುಮಾರ್, ದೀಪ್ತಿಮೋಹನ್, ಲೋಕೇಶ್, ಯಶ್ಪಾಲ್ ಮುಂತಾದವರಿದ್ದಾರೆ.